shruthi

shruthi

Sunday 1 January 2012

ಪ್ಲಾಸ್ಟಿಕ್ ಪರಮಾತ್ಮ !!

ಕಲ್ಪನೆಗಿದು ಕೃತಿಯಲ್ಲ
ಕವಿಹೃದಯದ ಕಥೆಯಲ್ಲ
ಕಲಿಯುಗದ ಅಧಿದೇವತೆ
ಪ್ಲಾಸ್ಟಿಕ್ ಮಾತೆ!
ಎತ್ತ ನೋಡಿದರತ್ತ
ಬರಿ ಇದರ ಮಾತೆss!


ನಿಸರ್ಗದ ನೀರವ
ಮೌನವ ನಿರಂಕುಶವಾಗಿ
ಆಳುತಿದೆ ಈ ನಿರ್ಜಿವ
ನಿಲ್ಲಿಸದಿದ್ದರೆ ಈ ಹಾವಳಿ
ನಾವಿದರ ದಾಹಕ್ಕೆ ಬಲಿ!


ಅವಿಬಾಜ್ಯ ಅಂಗವಾಗಿ
ಸವಿಯಾದ ಸುಧೆಯಾಗಿ
ಉಣಿಸುತಿದೆ ನಂಜನ್ನು
ಹನಿ ಹನಿಯಾಗಿ!


ಬಿಟ್ಟರೆ ಕಸವಾದೆ!
ಸುಟ್ಟರೆ ವಿಷವಾದೆ!
ಸುಡದೆ ಹಾಗೆ ಇಟ್ಟರೆ
ದನ ಕರುಗಳಿಗೆ ಅಹಾರವಾದೆ!
ಕೊಳೆತು ಜೀವಸಂಕುಲಕ್ಕೆ ನಾ ಶಾಪವಾದೆ!!!!!!!!!
-ಶ್ರುತಿ

1 comment:

  1. ಒಂದೇ ತಪ್ಪು ಕಲ್ಪನೆ ಶೃತಿಯವರೆ, ಪ್ಲಾಸ್ಟಿಕ್ ಎಂದಿಗೂ ಕೊಳೆಯುವುದಿಲ್ಲ. ಆದುದರಿಂದಲೇ ಅದರ ಬವಣೆ ತಪ್ಪುತ್ತಲ್ಲ. ನೈಸಗಿ೵ಕವಾಗಿ ಕೊಳೆಯುವ ವಸ್ತುವಾಗಿದ್ದಲ್ಲಿ ಗೊಬ್ಬರವಾದರೂ ಆಗುತ್ತಿದ್ದು. ಆದರೂ ಪ್ಲಾಸ್ಟಿಕ್ ರಾಕ್ಷಸನ ವಿವರ ತಿಳಿಸಿದ್ದಕ್ಕೆ ಧನ್ಯವಾದಗಳು.

    ReplyDelete