ಸಾಗುವಳಿ ಮಾಡದ ಭೂಮಿ,
ಸಾಗದ ಹಾದಿ,
ಸದ್ದಿಲದೆ ಘಟಿಸಿದ
ಸಾವಿರ ಘಟನೆಗಳು
ಚಿಗುರೆಲೆಗಳು,ತಂಬೆಲರು
ತನುವಿಗೆ ಸಂತಸದ
ತನ್ಮಯತೆ ನೀಡಿ
ತೃಪ್ತಿ ಪಡಿಸುತಿವೆ
ಹರೆಯ ಹೊರೆಯಾಗಿ
ಹರಿವ ನದಿಯಾಗಿ
ಹೂ೦ಕರಿಸಿ,ಹುರಿದುಂಬಿಸಿ
ಹುಸಿಯಾಗಿ ಕಳೆದುಹೊಗುತಿದೆ
ಅವಿತವಿತು ಕುಳಿತ
ಕನಸುಗಳು ಹಲವು,
ಅವನು ಅವರಾಗಿ
ಅನುರಾಗಿಯಾಗಿ ಭೈರಾಗಿ
ತಾನಾಗಬೇಕೆಂದುಕೊಳ್ಳುತಿರುವವನು
ರೆಕ್ಕೆ ಬಲಿತ ಹಕ್ಕಿಯಾದರು
ಹಾರಿತು ,ಹುಡುಕುತ ತನ್ನ ಪಾಡು
ಹಸಿವ ದಾಳಿಗೆ ತತ್ತರಿಸದ ಕಣವುಂಟೇ?
ಕೂಗಿ ಕೇಳದ ಕರುಳುoಟೇ?
ಪ್ರತಿದಿನವೂ ಹೊಸ ಪಗಡೆ
ಸೋತವನು ಸತ್ತ ,
ಗೆದ್ದವನು ಸತ್ತ,
ನೀ ಹೋಗುವ ದಾರಿಗೆ
ನಾ ಜೊತೆಗಾರ್ತಿ ಅಲ್ಲ
ಸಂಗಾತಿ ಅಲ್ಲ
ಬರೀ ಪಾಲುಗಾರ್ತಿ!!!!
-ಶೃತಿ
ಸಾಗದ ಹಾದಿ,
ಸದ್ದಿಲದೆ ಘಟಿಸಿದ
ಸಾವಿರ ಘಟನೆಗಳು
ಚಿಗುರೆಲೆಗಳು,ತಂಬೆಲರು
ತನುವಿಗೆ ಸಂತಸದ
ತನ್ಮಯತೆ ನೀಡಿ
ತೃಪ್ತಿ ಪಡಿಸುತಿವೆ
ಹರೆಯ ಹೊರೆಯಾಗಿ
ಹರಿವ ನದಿಯಾಗಿ
ಹೂ೦ಕರಿಸಿ,ಹುರಿದುಂಬಿಸಿ
ಹುಸಿಯಾಗಿ ಕಳೆದುಹೊಗುತಿದೆ
ಅವಿತವಿತು ಕುಳಿತ
ಕನಸುಗಳು ಹಲವು,
ಅವನು ಅವರಾಗಿ
ಅನುರಾಗಿಯಾಗಿ ಭೈರಾಗಿ
ತಾನಾಗಬೇಕೆಂದುಕೊಳ್ಳುತಿರುವವನು
ರೆಕ್ಕೆ ಬಲಿತ ಹಕ್ಕಿಯಾದರು
ಹಾರಿತು ,ಹುಡುಕುತ ತನ್ನ ಪಾಡು
ಹಸಿವ ದಾಳಿಗೆ ತತ್ತರಿಸದ ಕಣವುಂಟೇ?
ಕೂಗಿ ಕೇಳದ ಕರುಳುoಟೇ?
ಪ್ರತಿದಿನವೂ ಹೊಸ ಪಗಡೆ
ಸೋತವನು ಸತ್ತ ,
ಗೆದ್ದವನು ಸತ್ತ,
ನೀ ಹೋಗುವ ದಾರಿಗೆ
ನಾ ಜೊತೆಗಾರ್ತಿ ಅಲ್ಲ
ಸಂಗಾತಿ ಅಲ್ಲ
ಬರೀ ಪಾಲುಗಾರ್ತಿ!!!!
-ಶೃತಿ
ಕವಿತೆಯ ಒಳ ಹೊಕ್ಕಂತೆ, ಮನಸ್ಸು ಭಾವನೆಗಳ ಆಳಕ್ಕಿಳಿದು ಯೋಚಿಸಹತ್ತಿದೆ..... ಒಳ್ಳೆಯ ಕವನ...
ReplyDeleteಹಾಯ್ ಶ್ರುತಿ,
ReplyDeleteಬ್ಲಾಗ್ ನಲ್ಲಿ ನಿಮ್ಮನ್ನು ನೋಡಿ ಸಂತೋಷವಾಯಿತು....ಸುಂದರ ಕವನಗಳನ್ನು ಪ್ರಕಟಿಸಿದ್ದೀರಿ...ನಿಮ್ಮ ಬ್ಲಾಗ್ ಉತ್ತಮ ಕವನಗಳಿಂದ ಜನಪ್ರೀಯ ವಾಗಲಿ.....ಎಲ್ಲಾ ಕವನಗಳೂ ಚೆನ್ನಾಗಿವೆ....
ನನ್ನ ಬ್ಲಾಗ್ ಗೂ ಬನ್ನಿ ......
http://ashokkodlady.blogspot.com