ಗಾಳಿಯನರಿತು ನಡೆವ ಮೋಡ
ಭುವಿಯನರಿತು ಬೀಳುವ ಕಾಯಿ
ಇಳಿಜಾರನರಿತು ಹರಿಯುವ ನೀರು
ನಮ್ಮನ್ನು ನಾವರಿವ ಪರಿ
ಅರಳಿದ ಹೂವು ಮೊಗ್ಗಾದಿತೆ ?
ಹೆಪ್ಪಿಟ್ಟ ಮೊಸರು ಹಾಲಾದಿತೆ?
ಮಳೆ ಮರಳಿ ಮೋಡವ ಸೇರಿತೆ?
ನಮ್ಮ ನಡೆಯ ನೆರಳು ನಮ್ಮನ್ನಗಲಿತೆ ?
ನಾಳೆಯನ್ನು ತಿಳಿಯುವ ಮುನ್ನ
ನೆನ್ನೆಯನ್ನು ಮರೆಯುವ ಮುನ್ನ
ಒಮ್ಮೆ ನಿಂತು ನೋಡುವ ನಮ್ಮನ್ನು ನಾವು -ಶ್ರುತಿ
ಸ್ವ ವಿಮರ್ಶೆಗಿಂತಲೂ ಒಳಿತು ಬಾಳುಮೆಯಲ್ಲಿ ಇಲ್ಲ. ಒಳ್ಳೆಯ ಚಿಕಿತ್ಸಕ ಕವನ.
ReplyDeletehttp://badari-poems.blogspot.in/
Chennagide :)
ReplyDeleteತುಂಬಾ ಚೆನ್ನಾಗಿದೆ
ReplyDelete