shruthi

shruthi

Monday 6 May 2013

ನಾವು

ಗಾಳಿಯನರಿತು ನಡೆವ ಮೋಡ
ಭುವಿಯನರಿತು ಬೀಳುವ ಕಾಯಿ
ಇಳಿಜಾರನರಿತು ಹರಿಯುವ ನೀರು
ನಮ್ಮನ್ನು ನಾವರಿವ ಪರಿ

ಅರಳಿದ ಹೂವು ಮೊಗ್ಗಾದಿತೆ ?
ಹೆಪ್ಪಿಟ್ಟ ಮೊಸರು ಹಾಲಾದಿತೆ?
ಮಳೆ ಮರಳಿ ಮೋಡವ ಸೇರಿತೆ?
ನಮ್ಮ ನಡೆಯ ನೆರಳು ನಮ್ಮನ್ನಗಲಿತೆ ?

ನಾಳೆಯನ್ನು ತಿಳಿಯುವ ಮುನ್ನ
ನೆನ್ನೆಯನ್ನು ಮರೆಯುವ ಮುನ್ನ
ಒಮ್ಮೆ ನಿಂತು ನೋಡುವ ನಮ್ಮನ್ನು ನಾವು -ಶ್ರುತಿ

3 comments:

  1. ಸ್ವ ವಿಮರ್ಶೆಗಿಂತಲೂ ಒಳಿತು ಬಾಳುಮೆಯಲ್ಲಿ ಇಲ್ಲ. ಒಳ್ಳೆಯ ಚಿಕಿತ್ಸಕ ಕವನ.

    http://badari-poems.blogspot.in/

    ReplyDelete
  2. ತುಂಬಾ ಚೆನ್ನಾಗಿದೆ

    ReplyDelete