shruthi

shruthi

Saturday, 24 November 2012

ಕನಸಿಗೊಂದು ಕೂಸು...!

ಕನಸೊಂದು ಕಂಡೆ
ಅದಕೊಂದು ಕುಸಾಯಿತು,
ಆ ಕೂಸಿಗೊಂದು ಆಸೆಯಾಯಿತು,
ಆಸೆ ಮತ್ತೊಂದು ಹಗಲುಗನಸಾಗಿ
ನನ್ನ ಕಾಡತೊಡಗಿತ್ತು!

ಕನಸನ್ನು ಬಸರು
ಮಾಡಿದ್ದು ಕಲ್ಪನೆಯೇ
ಎಂದು,
ಕನಸು ಹೇಳಲಿಲ್ಲ
ನಾನು ಕೇಳಲಿಲ್ಲ!

ಇನ್ನು ಮೆಚ್ಚಿ ಕಂಡ
ಹಗಲುಗನಸೆಲ್ಲ ,ತೊಗಲುಗೊಂಬೆಯಂತೆ
ನನ್ನದೇ ಆಟ,
ನನ್ನದೇ ಹುಡುಕಾಟ,
ನನ್ನದೇ ಬಡಿದಾಟ!

ಮತ್ತೊಂದು ಇರುಳಿಗೆ
ಕಾಯುತ ಭೂಮಿಯು
ಅಲಂಕರಿಸಿಕೊಂಡಳು,
ಸಂಜೆಯಂತೆ
ಸಡಗರದಲ್ಲಿ !

ನಾನು ಅವಳಂತೆ
ಮತ್ತೊಮ್ಮೆ
ಕನಸು ಕಾಣಲು
ಅಣಿಯಾದೆ
ಕನಸ ನನಸಾಗಿಸುವ ಮನಸಮಾಡಿ !!!!!!!!!
-ಶ್ರುತಿ

1 comment:

  1. ಶ್ರುತಿಯವರೇ ತುಂಬಾ ಚನ್ನಾಗಿದೆ  , ನಿಮ್ಮ ಕನಸಿನ ಮಂಥನದಲ್ಲಿ ಸಿಕ್ಕ ಅಕ್ಷರಗಳು ಕವಿತೆಯಾದಾಗ ಇಂಥಹ ಕವಿತೆ ಮೂಡಲು ಸಾಧ್ಯ ನಿಮ್ಮ  ಜ್ಞಾನ ಭಂಡ್ಹಾರಕ್ಕೆ,ಶಬ್ಧ ಭಂಡ್ಹಾರಕ್ಕೆ ಜೈ ಹೋ ...
    superb!!! ಸುಪರ್ಬ್!!!   

    ReplyDelete