shruthi

shruthi

Tuesday, 11 September 2012

ಬೆಟ್ಟವ ದಾಟಿ ಬಂದ ಮೋಡದ ನೆರಳು.!

ಬೆಟ್ಟವ ದಾಟಿ ಬಂದ
ಮೋಡದ ನೆರಳು,
ತೊರೆದ ಮೇಲೆ
ಬಿಗಿದ ಕಣಿವೆಯ ಕೊರಳು

ಸಾಗರದ ಅಂಚಿನ ಮರಳಿಗೆ
ಅಲೆಗಳು ಹೇಳುವ ಗುಟ್ಟು
ಮರಳ ಸೇರಿ ಹಾಡಿ
ಹಂಚುವ ಗಾಳಿಗೆ ಗೊತ್ತು

ಬೆಳಗುವ ಕಿರಣ ತಂದ
ಬಳುವಳಿ
ಬಚ್ಚಿಟ್ಟುಕೊಂಡ ಭೂಮಿಗೆ
ತಾನೇ ಸ್ವಂತ

ಹೃದಯದಿ ಉದಯಿಸಿದ
ಚಂದ್ರನ ಮುಗುಳುನಗೆಯ
ಬಲ್ಲವಳು ನಲ್ಮೆಯ
ನೈದಿಲೆ ಮಾತ್ರ

ಕಾದ ಕಣ್ಣ ಬವಣೆ
ಅರಿಯಬಲ್ಲ
ಕಾದ ಹೆಂಚಿಗೆ ಕರುಣೆ
ತೋರಬಲ್ಲ
ಮಿಂಚಿಗೆ ಸಂಚ ಹೂಡಿ
ಸೆರೆಹಿಡಿಯಬಲ್ಲವನಾರು
ಬಲ್ಲವರ್ಯಾರು??
-ಶ್ರುತಿ

1 comment:

  1. ಹಾಯ್ ಶ್ರುತಿ,

    ಚೆನ್ನಾಗಿದೆ......ಶೀರ್ಷಿಕೆ ಬದಲಾಯಿಸಬಹುದಿತ್ತೇನೋ ???

    ReplyDelete