shruthi

shruthi

Friday, 28 October 2011

ಬರೆಯಲು ಆರಂಭಿಸಿ!

ಬರೆಯಲು ಆರಂಭಿಸಿ!
ವಿರುದ್ದ
ನನ್ನಲ್ಲಿ ಎನಿಲ್ಲವೆಂದಾಗ ಶುರುವಾಗುವುದೇ ಬದುಕಾ?
ನಾನೆಲ್ಲವನ್ನು ಕಳೆದುಕೊಂಡಾಗ ಅಲ್ಲಿ ಉಳಿಯುವುದೇ ಬದುಕಾ?
ಸಾಯುವುದಕ್ಕೆ ಹುಟ್ಟಿದ ನಾವು ಸಾವಿಗಾಗಿ ಅಂಜಿ ನಿಂತಾಗ
ಎದುರಗುವುದೇ ಬದುಕಾ?
ಯಾಕೆ ನಾವಿಲ್ಲಿ ಅರ್ಥವನ್ನು ಬಿಟ್ಟು ಅನರ್ಥವನ್ನು ಅಸ್ತಿತ್ವವನ್ನು ಬಿಟ್ಟು ಹೊಸದನ್ನು ಹುಡುಕುತಿದ್ದೆವೆ.
ಹುಡುಕಿದ ಆ ಹೊಸದಕ್ಕೆ ಅಪಾಯದ ಜೊತೆಗಾರ ಇರಲೇಬೇಕು!!!!!
ನಿರಂಕುಶರಾಗಿದ್ದೇವೆ ಎಂದು ತೋರುವುದಕ್ಕೋ ಅಥವಾ ನಿಸರ್ಗದ ನಿಯಮಕ್ಕೆ ನೀರು ಬಿಟ್ಟು
ಮಾರು ದೂರವಿರುವ ಮುನಿಸನ್ನು ಮೂರಕ್ಷರದ ಹತ್ತಿರಕ್ಕೆ ಸೆಳೆಯುವುದಕ್ಕೋ?!
ಎಷ್ಟು ಭಾವಗಳಿದ್ದರೇನು ನಿನ್ನೆ ನಿನಗಿಲ್ಲ ,ನಾಳೆ ಯಾರದ್ದೋ ಗೊತ್ತಿಲ್ಲ !!
ಇಲ್ಲಿ ಸೌಹಾರ್ದತೆ ಬರೀ ಮನುಷ್ಯರ ನಡುವಲ್ಲ,ಮನಸ್ಸುಗಳ ನಡುವಲ್ಲ ಮೂಕ ಪ್ರಪಂಚದೊಡನಗಬೇಕು.
ಇಲ್ಲೆಲ್ಲವೂ ಮಾನವ ಸಂತತಿ ಮಾನವ ನಿರ್ಮಿತವಾದರೆ ಊಳಿದ ಜೀವಿಗಳ ಪಾಡೇನು?
ಪ್ರಕ್ರುತಿಯಮ್ಮನ ಮಡಿಲಲ್ಲಿ ಎಲ್ಲ ಮಕ್ಕಳಿಗೂ ಸಮಪಾಲಿದೆ ತಪ್ಪು ಮಾಡಿದವರಿಗೆ ಆಕೆ ಬುದ್ದಿ ಹೇಳುತ್ತಲೇ ಬಂದಿದ್ದಾಳೆ
ಮಿತಿ ಮೀರಿದರೆ ,ನಮ್ಮ ನಾಶಕ್ಕೆ ನಾವೇ ಹೊಣೆ.
ಅಕೆಯೋಮ್ಮೆ ಮುನಿದರೆ,ಎಲ್ಲಿಯ ಹಣ,ಎಲ್ಲಿಯ ಮನೆ ,ಎಲ್ಲಿಯ ಸಂಬಂಧಗಳು,ಎಲ್ಲಿಯ ಭಾವ ,ಎಲ್ಲಿಯ ಪ್ರೇಮ ????
ಇನ್ನೆಲ್ಲಿ ಉಳಿಯುವುದು ಯಾರ ಸರಕಾರ ಯಾರ ಅಧಿಕಾರ ?
ಯುದ್ದವಾಗಲಿ ನಮ್ಮ ನಡುವೆ ನಮ್ಮಂತರಂಗದ ನಡುವೆ ಶಾಂತಿಗಾಗಿ.
ನಮ್ಮ ನಮ್ಮ ನಡುವೆಯಲ್ಲ,ಸತ್ತಮೇಲವನು ಎಂತಹವನೆ ಇರಲಿ ಒಳ್ಳೆಯವನು ಎನ್ನುವ ನಾವು ,
ಬದುಕಿದ್ದಾಗ ಅವನೆನೆಂದು ತಿಳಿಯುವುದರಲ್ಲಿ ಸೋತಿದ್ದೇವೆ !!!,
ಕಾರಣ ನಾನು ನನ್ನದು ,ನನ್ನ ಬಳಿ ಎಲ್ಲ ಇದೆ ಎಂದು ಇತರ ಜೀವಕ್ಕೆ ನೋಯಿಸುವ ನಮಗೆ ಎಷ್ಟು ಕೋತಿ ಜೀವಗಳ ಶಾಪವೋ ??
ತಾಯಿಯ ಗರ್ಭ ಸ್ವರ್ಗಕ್ಕೂ ಮಿಗಿಲೂ ಸ್ವರ್ಗದಲ್ಲಿ ಜಾಗ ನಮ್ಮ ಪಾಪ ಪುಣ್ಯದ ಮೇಲೆ ಸಿಗುವುದು ,
ಆದರೆ ಅಮ್ಮ ನಾವೆನೆಂದು ನೋಡುವ ಮೊದಲೇ ನಮಗಾಗಿ ಆಶ್ರಯ ನೀಡಿ ಬೆಳಸಿ ಜೋಪಾನವಾಗಿ ಜಗಕೆ ಕರೆತರುವಳು! .
ಒಮ್ಮೆ ಬಿದ್ದೆವೆಂದರೆ ಈ ಮಣ್ಣ ಮೇಲೆ ,,ನಿಸರ್ಗದಾಯಿಯ ಮಡಿಲು ನಮ್ಮನೆ,ಅಕೆಯಲ್ಲಿಯೇ ಇದ್ದು ಆಕೆಯನ್ನು ನಶಿಸಿ ಹಾಕುತ್ತಿರುವ ನಮಗೆ ಎನೆನ್ನಬೇಕೂ??
ನಿಮ್ಮನ್ನು ನೀವೇ ಕೇಳಿಕೊಳ್ಳಿರಿ????
-ಶ್ರುತಿ

No comments:

Post a Comment