ನಾನೊಂದು ಮರುಭೂಮಿ
ನನ್ನ ಜರಿದಿರಿ ನೀವು..
ನಿನ್ನಲಿಲ್ಲ ಜಲ,
ನಿಲ್ಲಲು ನೆಲ,
ಉಳಲು ಹೊಲ.
ನಾನಿಂದು ಅಭಿನಂದಿಸುತ್ತೇನೆ
ನನ್ನಲ್ಲಿ ಉಯ್ಯದ ವರುಣನಿಗೆ
ಹೊರಲಾರೆನು ನಾನು
ಹಸಿರ ಉಸಿರ
ಬಸಿದು ಬದುಕುವವರನ್ನು..
ನನ್ನೊಡಲೆ ನನ್ನ ಗುನು
ಬೆನ್ನ ಮಕ್ಕಳಿಗೆ ಅಂಗಳ
ನನ್ನಲಿರುವ ಭಣ ಭಣವೆ
ನನ್ನ ಆಭರಣ..
ಮರಳೇ ನನ್ನ ಮೇಲ್ಮುಸುಗು
ಒಮ್ಮೆ ಹಾರಿ ಮತ್ತೊಮ್ಮೆ ಜಾರಿ
ನನ್ನನು ಪುಳಕಿಸುತ್ತವೆ.
ಬೀಸಿ ಬಂದ ಬಿರುಗಾಳಿಗೆ ಸೋತು
ಪ್ರಜ್ವಲಿಸುವ ಪ್ರಕಾಶಕ್ಕೆ
ಮೈಯೊಡ್ಡಿದೆನೆಂದರೆ ನಾನೇ ಸುಖಿ..
ಕಂಡೊಡನೆ ಈ ಸೋಬಗ...
ಬಿಸಿಲಗುದುರೆಯನ್ನೇರಿ ಬಂದೀಯ ಜೋಕೆ..!!!
*** ಸಿಂಚನ ***
ನನ್ನ ಜರಿದಿರಿ ನೀವು..
ನಿನ್ನಲಿಲ್ಲ ಜಲ,
ನಿಲ್ಲಲು ನೆಲ,
ಉಳಲು ಹೊಲ.
ನಾನಿಂದು ಅಭಿನಂದಿಸುತ್ತೇನೆ
ನನ್ನಲ್ಲಿ ಉಯ್ಯದ ವರುಣನಿಗೆ
ಹೊರಲಾರೆನು ನಾನು
ಹಸಿರ ಉಸಿರ
ಬಸಿದು ಬದುಕುವವರನ್ನು..
ನನ್ನೊಡಲೆ ನನ್ನ ಗುನು
ಬೆನ್ನ ಮಕ್ಕಳಿಗೆ ಅಂಗಳ
ನನ್ನಲಿರುವ ಭಣ ಭಣವೆ
ನನ್ನ ಆಭರಣ..
ಮರಳೇ ನನ್ನ ಮೇಲ್ಮುಸುಗು
ಒಮ್ಮೆ ಹಾರಿ ಮತ್ತೊಮ್ಮೆ ಜಾರಿ
ನನ್ನನು ಪುಳಕಿಸುತ್ತವೆ.
ಬೀಸಿ ಬಂದ ಬಿರುಗಾಳಿಗೆ ಸೋತು
ಪ್ರಜ್ವಲಿಸುವ ಪ್ರಕಾಶಕ್ಕೆ
ಮೈಯೊಡ್ಡಿದೆನೆಂದರೆ ನಾನೇ ಸುಖಿ..
ಕಂಡೊಡನೆ ಈ ಸೋಬಗ...
ಬಿಸಿಲಗುದುರೆಯನ್ನೇರಿ ಬಂದೀಯ ಜೋಕೆ..!!!
*** ಸಿಂಚನ ***
ಸುಂದರ ವಿನ್ಯಾಸ, ಸುಂದರ ಸಾಲುಗಳು.
ReplyDeleteಕನ್ನಡ ಬ್ಲಾಗರ್ಸ್ ನಲ್ಲಿ ಸ್ನೇಹಿತರಾಗಿರುವುದಕ್ಕೆ ಧನ್ಯವಾದ.