shruthi

shruthi

Saturday, 8 October 2011

ಮೋಹನ ಮೌನ!!

ರಂಧ್ರವಿಲ್ಲದ ಕೊಳಲು ನಾನಲ್ಲ
ಒಮ್ಮೆ ನುಡಿಸಿದರೆ ಸಾಕು
ಸ್ವರಗಳ ಸರಾಗ
ಆದರೇಕೋ?
ನಿನ್ನಲಿ ಮೌನದ ಮುಸುಕು
ಯಾವುದೊ ಅಳುಕು

ಬೇಟೆಗಾರ ನಾನು
ಗೊಲ್ಲನಲ್ಲ ಹುಡುಗಿ
ಹೊಂಚಿ ಗೊತ್ತು ,ಹಾಡಿ ಗೊತ್ತಿಲ್ಲ
ಹಸಿ ಮಾಂಸ ಬೆಂದು
ತಿಂದ ರುಚಿಯೇ ಬಲುಚಂದ
ಅದರೆನೂ?
ನಿನ್ನ ಅಂದ
ಶ್ರಾವಣದ ಸಂಜೆಯ ಆನಂದ

ಸಾಗುತಿದೆ ಸಾವಿನ ಹಾದಿ
ಕಳಚುತಿದೆ ವಯಸಿನ ಬೂದಿ
ಅದರೆಂದು ತಾಕುವುದೋ
 ನಮ್ಮಿ ಮೌನಕ್ಕೆ ಮಾತಿನ ಕಿಡಿ ??

No comments:

Post a Comment