shruthi

shruthi

Tuesday 3 July 2012

ಹೋಗುವ ಮುನ್ನ .....!

ಸರಿದಿವೆ ಹೆಜ್ಜೆಗಳು
ಸರದಿಯಿಂದ
ಸೇರುವ ಬಯಕೆ
ಸುರಿವ ಮುಸ್ಸಂಜೆಯ
ಮಳೆಯಲ್ಲಿ ಕೊಚ್ಚಿಹೋಗಿದೆ

ಆಡದೆ ಉಳಿದ
ಅಮೂರ್ತ ಭಾವಗಳು
ಅಜ್ಞಾತವಾಗಿ,
ಅಳಿಸಿ ಹೋಗಿದೆ

ಕಲ್ಲು ಬಂಡೆಯಂತವಳು ನಾನು
ಕೋಟಿ ಉಳಿಪೆಟ್ಟಿಟ್ಟರು
ಕದಲಲಾರೇನು,
ಮೂಕ ಪ್ರಾಣಿನೊಂದರು
ಮರಗುವ ಮನಸ್ಸು
ನಿನ್ನದೆಂದು ಬಲ್ಲೆನು

ನಾ ಇಟ್ಟ ಹೆಜ್ಜೆಗಳೆಲ್ಲ
ಅಳಿಸಿ ಹೋಗಿಬಿಡಲಿ
ಅರಸದಿರು ನನ್ನ
ಪ್ರೀತಿ ಬಡಿಸಿದ್ದೇನೆ,
ಬಂದ ಬಿಡಿಸಿದ್ದೇನೆ
ಹೋಗಿ ಬರುವೆನೆಂದು ಹೇಳಲಾರೆನು
ಕಾರಣ
ನಾ ಮರೆಯಾಗುವ  ಸಮಯ
ಗ್ರಹಣವಲ್ಲ ಪಾಣಿಗ್ರಹಣ!!!!
-ಶೃತಿ

1 comment:

  1. ಮದುವೆ ಹಲವು ನೆನಪುಗಳನ್ನು ಅಳಿಸಿ ಬಿಡುವ ಕ್ರಿಯೆ.

    ಒಲಿದವನನ್ನೇ ವರಸಿಸುವ ಅದೃಷ್ಟವೂ ಕೆಲವರಿಗೆ ಸಿಕ್ಕುವುದೇ ಇಲ್ಲ.

    ಹೇಳ ಬೇಕಾದ ಮಾತುಗಳನೆಲ್ಲ ಇಲ್ಲಿ ಬರೆದಿಟ್ಟ ರೀತಿಯೇ ಒಂದು ಕಾವ್ಯ ಚಿತ್ತಾರ. ಭೇಷ್...

    ನನ್ನ ಬ್ಲಾಗಿಗೂ ಬನ್ನಿರಿ.
    www.badari-poems.blogspot.com

    ReplyDelete