ಇದು ಬಿಸಿಲನಾಡಿನ ಭಾವಗೀತೆ
ಇಲ್ಲಿ ,,
ಬಿಸಿಲಿನ ಝಳ
ಬಿರಿದಿಹ ಭೂಮಿ
ಬಳಲಿದ ದೇಹಗಳು
ಬಾಗಿದ ಬೆನ್ನುಗಳು
ಒಣಗಿದ ಮರಗಳು
ಹನಿ ನೀರಿಗೆ ಪರಿತಪಿಸುವ
ಬಾಯಿಗಳು,ಬಾವಿಗಳು
ಬೋಳು ಮರಗಳು
ದಾಹವನೀಗದೆ ಕಂಗೆಟ್ಟ
ಜಾನುವಾರಗಳು
ಬಸಿಯುತ್ತಿರುವ ಬೆವರು
ತಿರುಗುತ್ತಿರುವ ಕಣ್ಣುಗಳು
ಕಾದ ಹಂಚಿನ ಮನೆಗಳು
ಕಂಡ ಕಂಡವರ ಮನೆಯ
ಹೊಂಡ,ಕೊಂಡಗಳಲ್ಲಿ
ಕಣ್ಣು ಹಾಕುವ ಪಕ್ಷಿಗಳು
ಇಲ್ಲಿ ಬದುಕು ಬರ್ಬರ
ಬಡವರಿಗೆ ಮಾತ್ರ,
ಸಿರಿವಂತರಿಗೆ ಎಸಿ ರೂಮ್,ಮಿನರಲ್ ವಾಟರ್
ಇನ್ನು ದುಡಿವವರ ಪಾಡನು
ಕೇಳದಿದ್ದರೆ ಲೇಸು
ಬರವನ್ನು ಅಪ್ಪಿ ಕುಳಿತ
ಭೂತಾಯಿಯ ಮನವನೋಲಿಸಲು
ಬರಬಾರದ ಒಮ್ಮೆ ಮಳೆರಾಯ?
-ಶ್ರುತಿ
ಇಲ್ಲಿ ,,
ಬಿಸಿಲಿನ ಝಳ
ಬಿರಿದಿಹ ಭೂಮಿ
ಬಳಲಿದ ದೇಹಗಳು
ಬಾಗಿದ ಬೆನ್ನುಗಳು
ಒಣಗಿದ ಮರಗಳು
ಹನಿ ನೀರಿಗೆ ಪರಿತಪಿಸುವ
ಬಾಯಿಗಳು,ಬಾವಿಗಳು
ಬೋಳು ಮರಗಳು
ದಾಹವನೀಗದೆ ಕಂಗೆಟ್ಟ
ಜಾನುವಾರಗಳು
ಬಸಿಯುತ್ತಿರುವ ಬೆವರು
ತಿರುಗುತ್ತಿರುವ ಕಣ್ಣುಗಳು
ಕಾದ ಹಂಚಿನ ಮನೆಗಳು
ಕಂಡ ಕಂಡವರ ಮನೆಯ
ಹೊಂಡ,ಕೊಂಡಗಳಲ್ಲಿ
ಕಣ್ಣು ಹಾಕುವ ಪಕ್ಷಿಗಳು
ಇಲ್ಲಿ ಬದುಕು ಬರ್ಬರ
ಬಡವರಿಗೆ ಮಾತ್ರ,
ಸಿರಿವಂತರಿಗೆ ಎಸಿ ರೂಮ್,ಮಿನರಲ್ ವಾಟರ್
ಇನ್ನು ದುಡಿವವರ ಪಾಡನು
ಕೇಳದಿದ್ದರೆ ಲೇಸು
ಬರವನ್ನು ಅಪ್ಪಿ ಕುಳಿತ
ಭೂತಾಯಿಯ ಮನವನೋಲಿಸಲು
ಬರಬಾರದ ಒಮ್ಮೆ ಮಳೆರಾಯ?
-ಶ್ರುತಿ
ಬಿಸಿಲು ನಾಡಿನ ರೌಧ್ರತೆಯ ಅನಾವರಣ. ನಿರಂತರ ಬರ ಅಪ್ಪಿದ ತಾಲ್ಲೂಕಿನವನಾದ ನನ್ನ ಹಳ್ಳಿಯೂ ಇದಕಿಂತ ಹೊರತಿಲ್ಲ.
ReplyDeleteನನ್ನ ಬ್ಲಾಗಿಗೂ ಸ್ವಾಗತ.
ನಿಮ್ಮ ಈ ಭಾವಗೀತೆ ಪ್ರಸ್ತುತ ಪರಿಸ್ತಿತಿಗೆ ಕನ್ನಡಿ ಹಿಡಿದಂತಿದೆ ,
ReplyDelete"ಇಲ್ಲಿ ಬದುಕು ಬರ್ಬರ
ಬಡವರಿಗೆ ಮಾತ್ರ,
ಸಿರಿವಂತರಿಗೆ ಎಸಿ ರೂಮ್,ಮಿನರಲ್ ವಾಟರ್
ಇನ್ನು ದುಡಿವವರ ಪಾಡನು
ಕೇಳದಿದ್ದರೆ ಲೇಸು..."
ವಾ ! ಎಂಥ ಸಾಲುಗಳು ! ನಿಮ್ಮ ಈ ಬಡವರ ಬಗೆಗಿನ ಕಳಕಳಿ ತುಂಬಾ ಹಿಡಿಸಿತು .
ನಿಮ್ಮಿಂದ ಇನ್ನೂ ಹೆಚ್ಚಿನದನ್ನು ನೀರಿಕ್ಷಿಸುತ್ತಾ ...
ವಂದನೆಗಳು .
Chennagide aadre innu chennagi iro kavana nimma kalama inda haridu barali antha ashishutheene SHRUTHIavre
ReplyDelete